ಡೆತ್ ಫೋಲ್ಡರ್(ರಂಗಸ್ವಾಮಿ ಮೂಕನಹಳ್ಳಿ) - Death Folder(Rangaswamy Mookanahalli)
- Product Code: DEATHFOLDER
- Availability: 2-3 Days
₹200.00
ಇಲ್ಲಿ ಬದುಕಿನದ್ದುಕ್ಕೂ ನಾವು ಕಟ್ಟಿಕೊಂಡು ಬಂದ ಎಲ್ಲವನ್ನೂ ದಾಖಲಿಸಬೇಕಾಗುತ್ತದೆ. ಇದರಿಂದ ನಮ್ಮ ಮುಂದಿನ ಪೀಳಿಗೆಯ ಅಥವಾ ಯಾರನ್ನು ನಾವು ಮುಂದಿನ ವಾರಸುದಾರ ಅಥವಾ ವಾರಸುದಾರಳು ಎಂದುಕೊಳ್ಳುತ್ತೇವೋ ಅವರ ಬದುಕು ಸರಾಗವಾಗುತ್ತದೆ. ನಿಮಗೆಲ್ಲಾ ಗೊತ್ತಿರಲಿ ಬ್ಯಾಂಕುಗಳಲ್ಲಿ, ಇನ್ಸೂರೆನ್ಸ್ ಕಂಪೆನಿಗಳಲ್ಲಿ ವಾಪಸ್ಸು ಪಡೆಯದ ಕೋಟ್ಯಂತರ ಹಣವಿದೆ. ಬ್ಯಾಂಕುಗಳಲ್ಲಿ ಒಟ್ಟಾರೆ 78 ಸಾವಿರ ಕೋಟಿ ರೂಪಾಯಿ ಹಣವನ್ನು ಅಂದರೆ ಡೆಪಾಸಿಟ್ ಹಣವನ್ನು ಯಾರೂ ಕ್ಲೇಮ್ ಮಾಡಿಲ್ಲ; ಇನ್ನು 14 ಸಾವಿರ ಕೋಟಿ ರೂಪಾಯಿ ಇನ್ಸೂರೆನ್ಸ್ ಕಂಪೆನಿಗಳಲ್ಲಿ ಕ್ಲೇಮ್ ಮಾಡದೆ ಉಳಿದಿರುವ ಹಣ! ಅಂದರೆ ಈ ರೀತಿಯ `ಡೆತ್ ಫೋಲ್ಡರ್' ಸಿದ್ಧಪಡಿಸದ ಕಾರಣ ಮುಂದಿನ ಪೀಳಿಗೆಗೆ ಮಾಹಿತಿ ಕೊರತೆ ಇರುವ ಕಾರಣ ಈ ಹಣವನ್ನು ಹಿಂಪಡೆಯಲು ಸಾಧ್ಯವಾಗಿಲ್ಲ. ಇದರ ಜೊತೆಗೆ ಲೆಕ್ಕಕ್ಕೆ ಸಿಗದ ಮೊತ್ತದ ಆಸ್ತಿಗಳು ಸರಿಯಾದ ವಾರಸುದಾರರಿಗೆ ತಲುಪುತ್ತಿಲ್ಲ. ನಾವೇಕೆ ಇದನ್ನು ಸಿದ್ಧಪಡಿಸಬೇಕು ಎನ್ನುವುದಕ್ಕೆ ಇಷ್ಟು ಕಾರಣ ಸಾಕು. ನಾವು ಸಿದ್ಧಪಡಿಸುವ ಈ `ಡೆತ್ ಫೋಲ್ಡರ್' ನಮ್ಮನ್ನು ನಂಬಿದವರಿಗೆ ನಾವು ನೀಡುವ ನಿಜವಾದ ಉಡುಗೊರೆ.
Related Products
ಗಳಿಕೆ ಉಳಿಕೆ ಹೂಡಿಕೆ(ರಂಗಸ್ವಾಮಿ ಮೂಕನಹಳ್ಳಿ) - Galike Ulike Hoodike(Rangaswamy Mookanahalli)
ಹಣಕಾಸು ವ್ಯವಸ್ಥೆಯನ್ನು ಹೇಗೆ ಕಟ್ಟಲಾಗಿದೆ ಎನ್ನುವುದನ್ನು ಎಲ್ಲಕ್ಕೂ ಮೊದಲು ನಾವು ಅರ್ಥ ಮಾಡಿಕೊಳ್ಳಬೇಕು. ನಿಮಗೆಲ್ಲಾ ..
108 Daily ಮನಿ(ರಂಗಸ್ವಾಮಿ ಮೂಕನಹಳ್ಳಿ) - 108 Daily Money In Kannada (Rangaswamy Mookanahalli)
ಹಣ ಹೂಡಿಕೆಯ ತಜ್ಞ ರಂಗಸ್ವಾಮಿ ಮೂಕನಹಳ್ಳಿ ಅವರು ರಚಿಸಿದ ಕೃತಿ-108 Daily ಮನಿ. ವಿತ್ತ ಪದಗಳ ಅರ್ಥ ಗುಚ್ಛ ಎಂಬ ಉಪಶೀರ್..
ಹಣ ಏನಿದು ನಿನ್ನ ವಿಚಿತ್ರ ಗುಣ((ರಂಗಸ್ವಾಮಿ ಮೂಕನಹಳ್ಳಿ) - Hana Yenidu Ninna Vichitra Guna(Rangaswamy Mookanahalli)
ಹಣ ಏನಿದು ನಿನ್ನ ವಿಚಿತ್ರ ಗುಣ ನಿಮಗೆಲ್ಲಾ ಆನೆಯ ಕಥೆ ಗೊತ್ತಿರುತ್ತದೆ ಎಂದು ಭಾವಿಸುವೆ. ಒಂದು ಮರಿ ಆನೆಯ ಕಾಲಿಗೆ ಸರಪಳ..





