WhatsApp ಮೂಲಕ ಸಂಪರ್ಕಿಸಿ
ಹೇಳಿ ಹೋಗು ಕಾರಣ(ರವಿ ಬೆಳಗೆರೆ) - Heli Hogu Karana(Ravi Belagere)

ಹೇಳಿ ಹೋಗು ಕಾರಣ(ರವಿ ಬೆಳಗೆರೆ) - Heli Hogu Karana(Ravi Belagere)

  • Product Code: XN-HHK-RB
  • Availability: 2-3 Days
  • ₹350.00


Qty
ಉತ್ಕಟ ಪ್ರೇಮ ಕಥೆಯನ್ನು ಒಳಗೊಂಡಂತಹ ಕಥಾ ಹಂದರ ಹೊಂದಿರುವ ಕಾದಂಬರಿ ಹೇಳಿ ಹೋಗು ಕಾರಣ. ಕಥೆಯ ನಾಯಕನಾದ ಹಿಮವಂತ ಯಾವ ರೀತಿ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಾನೆ, ತೋರಿಕೆಯ ಪ್ರೀತಿ ಇಲ್ಲದೇ, ನಿಜವಾದ ಮನಸ್ಸಿನಿಂದ ಪ್ರೀತಿಸಿದ ಹುಡುಗನ ಮನಸ್ಸಿನ ಮುಗ್ದತೆ ಯಾವ ರೀತಿ ಇರುತ್ತದೆ ಎಂಬುದರ ಕುರಿತು ಈ ಪುಸ್ತಕ ವಿವರಿಸುತ್ತಾ ಹೋಗುತ್ತದೆ. ಪ್ರೀತಿ ಅಸಹನೆಯಾಗಿ ಬದಲಾಗುವ, ಮುಗ್ದತೆ ಮೋಸವಾಗಿ ಬದಲಾಗುವ, ಗೊಂದಲ ನಿರ್ಧಾರವಾಗಿ ಬದಲಾಗುವ, ಕನಸುಗಳು ನನಸಾಗಿ ಬದಲಾಗುವ ಮತ್ತು ಸತ್ಯ ಸುಳ್ಳಾಗಿ ಬದಲಾಗುವ ಸಂಧರ್ಭಗಳ ಹದವಾದ ಮಿಶ್ರಣವೇ ಹೇಳಿ ಹೋಗು ಕಾರಣ. ರವಿ ಬೆಳಗೆರೆಯವರ ಲೇಖನಿಯಿಂದ ಮೂಡಿಬಂದಂತಹ ಮತ್ತು ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾದಾಗ ಅಪಾರ ಜನಮನ್ನಣೆ ಗಳಿಸಿದ��ತಹ ಕಾದಂಬರಿ ಇದು. ಕಾದಂಬರಿಯಲ್ಲಿ ಬರುವ ಪ್ರಾರ್ಥನ, ಊರ್ಮಿಳಾ ಮತ್ತು ದೇಬಶಿಶು ಬಂಡೋಪಾಧ್ಯಾಯ ಪಾತ್ರಗಳು ಎಲ್ಲೋ ಓದುಗರ ಜೀವನಕ್ಕೆ ಸಂಬಂಧಿಸಿದ್ದವೇನೋ ಎಂಬ ಭಾವನೆಯನ್ನು ಹುಟ್ಟು ಹಾಕುತ್ತವೆ. ಪ್ರೀತಿ ಪ್ರೇಮದ ಕಥಾ ಹಂದರದ ಮೇಲೆ ಆಸಕ್ತಿ ಇರುವ ಓದುಗರಿಗೆ ಲಭ್ಯವಿರುವ ಅತ್ಯುತ್ತಮ ಕಾದಂಬರಿಯಿದು.

Be the first to write a review for this product.

Write a review

Note: HTML is not translated!
Bad           Good